India News

ಅರ್ಬಾಜ್ ಖಾನ್ ನೆನೆದು ಮಲೈಕಾ ಕಣ್ಣೀರು..!

WhatsApp Group Join Now
Telegram Group Join Now
ಪ್ರೀತಿ ಒಂಥರಾ ಅಮಲು ಇದ್ದಂತೆ. ನೆತ್ತಿಗೇರುವುದು ಗೊತ್ತಾಗಲ್ಲ.‌ಇಳಿಯುವುದು ಗೊತ್ತಾಗಲ್ಲ. ಅಪ್ಪಿ ತಪ್ಪಿ ಗೊತ್ತಾಗಿ ಕಣ್ ಬಿಟ್ಟಾಗ ಸಮಾಜ ಬೇರೆಯದ್ದೇ ರೀತಿಯ ಮಾತುಗಳನ್ನಾಡಲು ಶುರು ಮಾಡುತ್ತೆ. ಅದರಲ್ಲಿಯೂ ಸೆಲೆಬ್ರೀಟಿಯಾದರೆ ಮುಗೀತು. ಹೆಜ್ಜೆ ಹೆಜ್ಜೆಗೂ ಕೊಂಕು ನುಡಿ.ಇಂತಹ ಕಷ್ಟಕರ ಹಾಗೂ ಕ್ಲಿಷ್ಟಕರ ಸಮಯವನ್ನ ಎದುರಿಸಿ, ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲು.
ಇಂಥಹದ್ದೇ ಒಂದು ಸವಾಲಿನ ಬಗ್ಗೆ ಮಲೈಕಾ ಅರೋರಾ ಮಾತನಾಡಿದ್ದಾರೆ. ಮನದ ಮಾತು ಹಂಚಿಕೊಂಡು ಹಗುರಾಗಿದ್ದಾರೆ ಹೌದು ನಿಮಗೆ ಗೊತ್ತಿರಬೇಕು. ಮಲೈಕಾ ಈಗ ಅರ್ಬಾಜ್ ಖಾನ್ ಜೊತೆ ಇಲ್ಲ.ಅದಕ್ಕೆ ಕಾರಣ ಹತ್ತು ಇರಬಹುದು. ನೂರು ಇರಬಹುದು.

ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರೂ ದೂರವಾಗಿದ್ದಾರೆ. ಬೇರೊಂದು ಮದುವೆ ಮಾಡಿಕೊಂಡು ಅರ್ಬಾಜ್ ಖಾನ್ ಖುಷಿಯಾಗಿದ್ದಾರೆ. ಮಲೈಕಾ ಕೂಡ ಅರ್ಜುನ್ ಕಪೂರ್ ಅವರನ್ನ ಮನದರಸ ಎಂಬ ಸಿಂಹಾಸನದ ಮೇಲೆ ಕೂರಿಸಿ ಪ್ರೀತಿಯ ಮಳೆಯಲ್ಲಿ ನೆನೆಯುತ್ತಿದ್ದಾರೆ.ಆದರೆ ಕೆಲವರಿಗೆ ಇದು ಇಷ್ಟ ಇಲ್ಲ. ಇಷ್ಟ ಇಲ್ಲ ಅನ್ನುವುದಕ್ಕಿಂತ ಸಂಬಂಧ ಹಳಸಿ ಹೋಗಲು ಮಲೈಕಾ ಕಾರಣ ಅನ್ನುವುದು ಅನೇಕರ ಅಭಿಪ್ರಾಯ.

ಸಮಾಜದ ದೃಷ್ಟಿಕೋನ ಮೊದಲಿಂದ ಹಾಗೇ ಇದೆ ಬಿಡಿ. ಹೀಗಾಗಿಯೇ ಸಿಡಿದೆದ್ದ ಮಲೈಕಾ ಮನದ ನೋವನ್ನ ಹೊರ ಹಾಕಿದ್ದಾರೆ. ನನ್ನ ಹಕ್ಕು ನನ್ನ ಪ್ರೀತಿಗೆ ಬೆಲೆ ಇಲ್ಲವಾ ಎಂದು ಬಿಕ್ಕಿದಾರೆ ಮದುವೆಯಾದ ಹಲವಾರು ವರ್ಷಗಳ ನಂತರ ನನಗೆ ಬೇಕಾಗಿರುವುದು ಏನು ಎಂಬುದನ್ನು ಅರಿತುಕೊಂಡೆ ಎಂದ ಮಲೈಕಾ, ಅರ್ಬಾಜ್‌ನಿಂದ ಬೇರ್ಪಡುವ ಮುನ್ನ ಎದುರಿಸಿದ ಮಾನಸಿಕ ಒತ್ತಡದ ಬಗ್ಗೆ ಮಾತನಾಡಿದ್ದಾರೆ. ಮಾಡಲಾದ ಟ್ರೋಲ್ ಹಾಗೂ ಅಪಹಾಸ್ಯ ನೆನೆದು ಕಣ್ಣೀರಿಟ್ಟಿದ್ದಾರೆ.

ಬಟ್ಟೆ ಬರೆ ಎಲ್ಲವೂ ಅರ್ಬಾಜ್ ಖಾನ್ ಅವರಿಂದ ಬಂದಿದ್ದು ಎಂಬ ಕಮೆಂಟ್ ನೋಡಿ ಕುಗ್ಗಿ ಹೋಗಿದ್ದಾಗಿಯೂ ಹೇಳಿದ್ದಾರೆ.ಇನ್ನೂ ಇದೇ ಸಮಯದಲ್ಲಿ ನನ್ನ ಬುದ್ಧಿಗೆ ಏನಾಗಿತ್ತು ಎಂದು ನನಗೆ ತಿಳಿದಿಲ್ಲ. ನನಗೆ ಸಾಕಷ್ಟು ಫ್ರೀಡಂ ಕೊಟ್ಟರೂ, ನನ್ನ ಜೀವನವನ್ನು ಬೇಕಾದಂತೆ ರೂಪಿಸಲು ಅವಕಾಶವಿದ್ದರೂ ನಾನು 22-23 ರೊಳಗೆ ಮದುವೆಯಾಗಬೇಕು ಎಂದು ಹೇಳಿದ್ದೆ. ಯಾರೂ ನನ್ನನ್ನು ಬಲವಂತಪಡಿಸಲಿಲ್ಲ ಎಂದು ಮಲೈಕಾ ಹೇಳಿದ್ದಾರೆ. ಆ ಸಮಯದಲ್ಲಿ ನನಗೆ ಬೇಕಾಗಿರುವುದು ಮದುವೆಯಾ?

ವೃತ್ತಿಯಾ..? ಅಥವಾ ಎರಡು ಅಲ್ಲದೇ ಬೇರೆ ಏನಾದರೂ ಇತ್ತಾ..? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಬದುಕನ್ನ ಅರ್ಥ ಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ಪಶ್ಚಾತಾಪ ಪಟ್ಟಿದ್ದಾರೆ ಮಲೈಕಾ.ಮುಂದುವರೆದು ಮಾತನಾಡಿರುವ ಮಲೈಕಾ ನಾನು ವಿಚ್ಛೇದನ ಪಡೆಯಲು ನಿರ್ಧರಿಸಿದಾಗ, ಉದ್ಯಮದಲ್ಲಿ ನಟಿಯರು ಅಷ್ಟಾಗಿ ವಿಚ್ಛೇದನ ಪಡೆದು ಮುಂದುವರಿಯುತ್ತಿರಲಿಲ್ಲ. ನನಗಾಗಿ, ನನ್ನ ವೈಯಕ್ತಿಕ ಬೆಳವಣಿಗೆಗೆ, ನನ್ನ ಆಯ್ಕೆಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು ಅಂದಿದ್ದಾರೆಒಟ್ಟಿನಲ್ಲಿ ಪ್ರೀತಿ ಎಂಬ ಎರಡಕ್ಷರಕ್ಕೆ ವಿಪರೀತ ಶಕ್ತಿ ಇದೆ.

ಆ ಶಕ್ತಿಯನ್ನ ಸದುಪಯೋಗ ಪಡಿಸಿಕೊಳ್ಳಲು ಎಲ್ಲರೂ ಇಲ್ಲಿ ಪ್ರಯತ್ನ ಪಡುತ್ತಾರೆ. ಕೆಲವರು ಗೆಲ್ಲುತ್ತಾರೆ, ಇನ್ನೂ ಉಳಿದವರು ಎಡವುತ್ತಾರೆ. ಎಡವಿದಾಗ ಎದುರಾಗುವ ಅವಮಾನಗಳ ರಾಯಭಾರಿಯಂತೆ ಮಲೈಕಾ ಎಲ್ಲರಿಗೂ ಸದ್ಯಕ್ಕೆ ಕಾಣ್ತಿದ್ದಾರೆ. ಪ್ರೀತ್ಸೋದ್ ತಪ್ಪಾ..?

WhatsApp Group Join Now
Telegram Group Join Now
Back to top button