Feature ArticleWorld News

ಮುಸ್ಲಿಮರು ಖರ್ಜೂರ ಸೇವಿಸಿ ಏಕೆ ಉಪವಾಸ ಮುರಿಯುತ್ತಾರೆ ಗೊತ್ತಾ?

WhatsApp Group Join Now
Telegram Group Join Now

ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ತಿಂಗಳು ಆರಂಭಗೊಂಡಿದೆ. ವಿಶ್ವದಾದ್ಯಂತ ಮುಸ್ಲಿಂ ಸಮುದಾಯ ಒಂದು ತಿಂಗಳ ಕಾಲ ಉಪವಾಸ ಸೇರಿ ಹಲವು ಆಚರಣೆಗಳ ಮಾಡಲಿದ್ದಾರೆ. ಬೆಳಗ್ಗೆ ಸೂರ್ಯೋದಯದ ನಂತರ ಆರಂಭವಾಗುವ ಉಪವಾಸವು ಸೂರ್ಯಾಸ್ತವಾದ ಬಳಿಕ ಕೊನೆಗೊಳ್ಳುತ್ತದೆ. ವಿಶ್ವದ ಮೂಲೆ ಮೂಲೆಯಲ್ಲೂ ಇದೇ ರೀತಿಯ ಸಂಪ್ರದಾಯವನ್ನು ಅವರು ಪಾಲಿಸುತ್ತಾರೆ.

 

ಇನ್ನು ರಂಜಾನ್ ಉಪವಾಸಲ್ಲಿ ಅವರು ನೀರು ಸಹ ಕುಡಿಯುವುದಿಲ್ಲ. ಹೀಗಾಗಿ ಸಂಜೆಯಾಗುತ್ತಿದ್ದಂತೆ ಪ್ರಾರ್ಥನೆಯ ಬಳಿಕ ಅವರು ಖರ್ಜೂರ ಸೇವನೆಯ ಬಳಿಕವಷ್ಟೇ ಉಪವಾಸ ಮುರಿಯುತ್ತಾರೆ. ಹಾಗಾದರೆ ಖರ್ಜೂರ ಸೇವನೆಯಿಂದಲೇ ಮುಸ್ಲಿಮರು ತಮ್ಮ ಉಪವಾಸ ಮುರಿಯುವುದು ಏಕೆ ಎಂಬ ಕುರಿತು ನಿಮಗೆ ತಿಳಿದಿದ್ಯಾ?

 

ಮುಸ್ಲಿಮರು ತಮ್ಮ ಉಪವಾಸವನ್ನು ಮುರಿಯಲು ಖರ್ಜೂರವನ್ನು ಏಕೆ ಬಳಸುತ್ತಾರೆ?

 

ರಂಜಾನ್ ಸಮಯದಲ್ಲಿ, ಮುಸ್ಲಿಮರು ಮುಂಜಾನೆಯಿಂದ ಸೂರ್ಯಾಸ್ತದವರೆಗೆ ಆಹಾರ ಅಥವಾ ನೀರನ್ನು ಸೇವಿಸುವುದಿಲ್ಲ. ಇಡೀ ದಿನ ಉಪವಾಸ ಇರುವ ಕಾರಣ ಅವರಲ್ಲಿ ಆಯಾಸ, ಸುಸ್ತು ಹಾಗೂ ಶಕ್ತಿ ಇಲ್ಲದ ಅನುಭವವಾಗುತ್ತದೆ. ಆದರೆ ಖರ್ಜೂರವು ಪ್ರೋಟಿನ್‌ನಿಂದ ತುಂಬಿಕೊಂಡಿದೆ. ಇದು ದೇಹಕ್ಕೆ ತ್ವರಿತವಾಗಿ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಖರ್ಜೂರವು ಫೈಬರ್, ಕಬ್ಬಿಣ ಅಂಶ, ಸೋಡಿಯಂ ಮತ್ತು ಪ್ರೊಟ್ಯಾಸಿಯಂನಿಂದ ಸಮೃದ್ಧವಾಗಿದೆ.

ಇದು ಆಹಾರವಿಲ್ಲದೆ ಹೊಟ್ಟೆಯಲ್ಲಿ ಸಂಗ್ರಹವಾಗುವ ಗ್ಯಾಸ್ ಮತ್ತು ಆಮ್ಲೀಯ ಸ್ಥಿತಿಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ. ಹೀಗಾಗಿ ಅವರು ಖರ್ಜೂರ ಮತ್ತು ನೀರಿನೊಂದಿಗೆ ಉಪವಾಸ ಮುರಿಯುತ್ತಾರೆ. ಇದಿಷ್ಟೇ ಅಲ್ಲ ಪ್ರವಾಸಿ ಮಹಮ್ಮದ್ ತಮ್ಮ ಉಪವಾಸ ಮುರಿಯಲು ಖರ್ಜೂರವನ್ನೇ ಆಯ್ಕೆ ಮಾಡಿಕೊಂಡಿದ್ದರು ಎಂದು ಪವಿತ್ರ ಕುರಾನ್‌ನಲ್ಲಿ ಉಲ್ಲೇಖವಿದೆ.

ಇದಲ್ಲದೆ ಉತ್ತಮ ದೇಹದ ಆರೋಗ್ಯಕ್ಕಾಗಿ ಬೆಳಗ್ಗೆ ಮತ್ತು ಮಲಗುವ ಮುನ್ನ 7 ಖರ್ಜೂರ ಸೇವಿಸಬೇಕು ಎಂದು ಪ್ರವಾದಿಯರು ಬೋಧಿಸಿದ್ದಾರೆ ಎಂದು ಹೇಳಲಾಗಿದೆ. ಏಕೆಂದರೆ ಖರ್ಜೂರವು ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು ನೆರವಾಗುತ್ತದೆ. ಹೀಗಾಗಿ ಮುಸ್ಲಿಮರು ಉಪವಾಸವನ್ನು ಖರ್ಜೂರ ಸೇವನೆಯ ಮೂಲಕ ಮುರಿಯುತ್ತಾರೆ. ಜೊತೆಗೆ ಹಣ್ಣಿನ ಜ್ಯೂಸ್, ಹಣ್ಣು, ವಿವಿಧ ರೀತಿಯ ಭಕ್ಷ್ಯಗಳ ಸೇವನೆಯ ಮೂಲಕ ತಮ್ಮ ಉಪವಾಸ ಮುರಿಯುತ್ತಾರೆ.

ಉಪವಾಸದ ಬಳಿಕ ಏನು ಸೇವಿಸಬೇಕು

ಸುಹೂರ್‌ನಲ್ಲಿ ಒಂದೆರಡು ಖರ್ಜೂರಗಳನ್ನು ಸೇವಿಸುವ ಮೂಲಕ ದಿನದ ಸಕ್ಕರೆಯ ಅಗತ್ಯತೆಯನ್ನು ಪೂರೈಸಿಕೊಳ್ಳಬಹುದು. ಇಫ್ತಾರ್ ಹೊತ್ತಿನಲ್ಲಿಯೂ ಒಂದೆರಡು ಖರ್ಜೂರ ಸೇವಿಸಿದರೆ ಸಾಕು. ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆಯಾಗಿರುವ ಫ್ರುಕ್ಟೋಸ್ ಹಾಗೂ ಕರಗದ ನಾರು ಇದ್ದು ದೇಹದಲ್ಲಿ ಗ್ಲುಕೋಸ್ ಮಟ್ಟವನ್ನು ಸಂತುಲಿತ ಮಟ್ಟದಲ್ಲಿರಿಸಲು ನೆರವಾಗುತ್ತವೆ.

ಸುಹೂರ್ ನಲ್ಲಿ ಹಸಿಯಾಗಿ ಸೇವಿಸಬಹುದಾದ ತರಕಾರಿಗಳು, ಸೊಪ್ಪುಗಳು ಹಾಗೂ ಹಣ್ಣುಗಳನ್ನು ಕಡ್ಡಾಯವಾಗಿ ಸೇವಿಸಬೇಕು. ಇವುಗಳಲ್ಲಿ ನೀರಿನಂಶ ಹೆಚ್ಚಾಗಿದ್ದು ಕರಗದ ನಾರು ಸಹಾ ಹೆಚ್ಚಿರುತ್ತದೆ. ಅಲ್ಲದೇ ವಿಟಮಿನ್ನುಗಳು, ಕ್ಯಾಲ್ಸಿಯಂ ಹಾಗೂ ಅಗತ್ಯ ಖನಿಜಗಳು ದಿನದ ಉಪವಾಸದ ಅವಧಿಯನ್ನು ಎದುರಿಸಲು ನೆರವಾಗುತ್ತವೆ.

ನಿಮ್ಮ ಸುಹೂರ್ ಅಥವಾ ಇಫ್ತಾರ್ ನ ಊಟಕ್ಕೂ ಮೊದಲು ಕೊಂಚ ಸೂಪ್ ಕುಡಿಯುವುದು ಅತ್ಯುತ್ತಮ ಆಯ್ಕೆಯಾಗಿದೆ. ಇದು ದೇಹಕ್ಕೆ ಹೆಚ್ಚಿನ ಆರ್ದ್ರತೆಯನ್ನು ನೀಡುವುದು ಮಾತ್ರವಲ್ಲ, ದೇಹ ಕಳೆದುಕೊಂಡಿದ್ದ ಶಕ್ತಿಯನ್ನು ಮರುತುಂಬಿಕೊಳ್ಳಲೂ ನೆರವಾಗುತ್ತದೆ.

ಇಡಿಯ ಧಾನ್ಯಗಳಲ್ಲಿ ಹೆಚ್ಚಿನ ಕರಗದ ನಾರು ಮತ್ತು ಕಾರ್ಬೋಹೈಡ್ರೇಟುಗಳಿರುತ್ತವೆ. ಇವು ನಿಧಾನವಾಗಿ ಜೀರ್ಣಗೊಳ್ಳುವ ಮೂಲಕ ಇಡಿಯ ದಿನ ಹಸಿವನ್ನು ನಿಗ್ರಹಿಸಲು ನೆರವಾಗುತ್ತವೆ. ಸುಹೂರ್ ನಲ್ಲಿಯೂ, ಇಫ್ತಾರ್ ನಲ್ಲಿಯೂ ಇಡಿಯ ಧಾನ್ಯಗಳಿಂದ ಮಾಡಿದ ಖಾದ್ಯ ನಿಮ್ಮ ಪ್ರಮುಖ ಆಹಾರವಾಗಿರುವಂತೆ ನೋಡಿಕೊಳ್ಳುವುದು ಪ್ರಥಮ ಅಗತ್ಯವಾಗಿದೆ.

ಈ ಅಗತ್ಯವನ್ನು ಕಂಡುಕೊಂಡ ಅರಬರು ಗೋಧಿಯಿಂದ ಮಾಡಿದ ‘ಹರೀಸ್’ ಎಂಬ ಖಾದ್ಯವನ್ನು ಎರಡೂ ಹೊತ್ತುಗಳಲ್ಲಿ ಕಡ್ಡಾಯವಾಗಿ ಸೇವಿಸುತ್ತಾರೆ. ಕುಚ್ಚಿಗೆ ಗಂಜಿ, ಗೋಧಿ ಬೇಯಿಸಿ ಮಾಡಿದ ಖಾದ್ಯಗಳು ಉತ್ತಮ ಆಯ್ಕೆಯಾಗಿವೆ. ಇನ್ನುಳಿದಂತೆ ಗೋಧಿಯ ಶ್ಯಾವಿಗೆ, ಇಡಿಯ ಗೋಧಿಯ ಬ್ರೆಡ್, ಓಟ್ಸ್ ಮೊದಲಾದವುಗಳನ್ನು ಸೇವಿಸಬಹುದು. ಮೈದಾ ಬೇಡ. ಏಕೆಂದರೆ ಮೈದಾದಲ್ಲಿ ನಾರು ಇಲ್ಲವಾದುದರಿಂದ ಮಲಬದ್ದತೆಗೆ ಕಾರಣವಾಗಬಹುದು.

WhatsApp Group Join Now
Telegram Group Join Now
Back to top button