Business News

ವಾಹನ ಸವಾರರಿಗೆ ಗುಡ್‌ ನ್ಯೂಸ್: ಪೆಟ್ರೋಲ್‌, ಡೀಸೆಲ್ ದರ ಇಂದಿನಿಂದ ಇಳಿಕೆ

WhatsApp Group Join Now
Telegram Group Join Now
ದೆಹಲಿ ಮಾರ್ಚ್ 15: ದೇಶದಲ್ಲಿ ಚುನಾವಣೆ ಪರ್ವ ಜೋರಾಗಿದೆ. ಗ್ಯಾರೆಂಟಿಗಳು, ಕೊಡುಗೆಗಳ ಮೂಲಕ ಮತದಾರರ ಮನ ಗೆಲ್ಲಲು ಪಕ್ಷಗಳು ಆರಂಭಿಸಿವೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್ ದರ ಇಳಿಕೆ ಮಾಡಿದ್ದು ಇಂದಿನಿಂದ ಅದು ಜಾರಿಗೆ ಬರಲಿದೆ.ಲೋಕಸಭಾ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ.
ಅದಾಗಲೇ ಮತದಾರರ ಗಮನ ಸೆಳೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಪೆಟ್ರೋಲ್‌, ಡೀಸೆಲ್ ದರಗಳನ್ನು ತಲಾ ಎರಡು ರೂಪಾಯಿಗೆ ಇಳಿಕೆ ಮಾಡಿದೆ. ಶುಕ್ರವಾರ ಅಂದರೆ ಇಂದು (ಮಾರ್ಚ್ 15) ದೇಶದ್ಯಂತ ಬೆಳಗ್ಗೆ 6ರಿಂದ ಇದು ಜಾರಿಗೆ ಬರಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಯಲ್ಲಿ ತುಸು ಇಳಿಕೆಯಾದ ಕಾರಣ ಇಂದನ ದರಗಳನ್ನು ಇಳಿಕೆ ಮಾಡಲಾಗಿದೆ.

ಇದಕ್ಕೂ ಮೊದಲು ಗ್ಯಾಸ್‌ ಸಿಲಿಂಡರ್‌ ದರವನ್ನೂ ಸಹ ಕೇಂದ್ರ ಸರ್ಕಾರ 100 ರೂಪಾಯಿ ಕಡಿಮೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಹೊಸ ಪೆಟ್ರೋಲ್‌ ದರ 94.72ರೂಪಾಯಿಗಳಿಗೆ ಇಳಿದಿದೆ. ಮುಂಬೈನಲ್ಲಿ 104.21 ರೂಪಾಯಿಗಳಷ್ಟಿದೆ. ಈ ಆದೇಶವು ಮಾರ್ಚ್ 15ರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದೆ.ರಾಜಸ್ಥಾನದಲ್ಲಿ 5 ರೂಪಾಯಿ ಇಳಿಕೆ ಮಾಡಲಾಗಿದೆ.

ಹೌದು ರಾಜಸ್ಥಾನ ಸರ್ಕಾರ ಪೆಟ್ರೋಲ್, ಡೀಸೆಲ್ ವ್ಯಾಟ್ ದರಗಳನ್ನು ಇಳಿಕೆ ಮಾಡಿದೆ. ಹೀಗಾಗಿ ಅಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರಗಳು 5ರೂಪಾಯಿಗಳಷ್ಟು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ ಹಿಂದೆ ಇದ್ದ 101.94 ದರ ಈಗ 99.94ರಷ್ಟಾಗಿದೆ. ಇನ್ನೂ ಡೀಸೆಲ್‌ ದರ ಲೀಟರ್‌ಗೆ 87.89 ಇತ್ತು ಈಗ ಅದು 85.89 ಆಗಿದೆ.ಕೋಲ್ಕತ್ತಾದಲ್ಲಿ ಇಂದು ಪೆಟ್ರೋಲ್ ದರ 106.03ರೂ.ನಿಂದ 103.94 ರೂ.ಗೆ ಇಳಿಕೆಯಾಗಿದ್ದು, ಡೀಸೆಲ್ ದರ ಲೀಟರ್​ಗೆ 92.76 ರೂ.ನಿಂದ 90.76 ರೂ.ಗೆ ಇಳಿಕೆ ಕಂಡಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ 106.31ರೂ.ನಿಂದ 104.21ರೂ.ಗೆ ಹಾಗೂ ಡೀಸೆಲ್ ಲೀಟರ್​ಗೆ 94.27 ರೂ.ನಿಂದ 92.15 ರೂ.ಗೆ ಇಳಿಕೆ ಕಂಡಿದೆ.ಲಕ್ನೋದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 96.57 ರೂ.ನಿಂದ 94.65ರೂ.ಗೆ ಇಳಿದಿದೆ. ಆಗ್ರಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.20ರ ರೂ.ನಿಂದ 94.35ರೂ.ಗೆ ಇಳಿದಿದೆ. ಡೀಸೆಲ್ 89.37 ರೂ.ನಿಂದ 87.41 ರೂ.ಗೆ ಇಳಿದಿದೆ. ಮೀರತ್​ನಲ್ಲಿ ಪೆಟ್ರೋಲ್ ಬೆಲೆ 96.31 ರೂ.ನಿಂದ 94.43 ರೂ.ಗೆ ಇಳಿದಿದೆ.

WhatsApp Group Join Now
Telegram Group Join Now
Back to top button