Politics NewsState News

ಇಲ್ಲಿದೆ 21 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ

WhatsApp Group Join Now
Telegram Group Join Now

ಬೆಂಗಳೂರು: 21 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಶುಕ್ರವಾರ ಅಂತಿಮಗೊಳ್ಳಲಿದ್ದು, ಸೋಮವಾರ ಬಿಡುಗಡೆಯಾಗುವುದು ಬಹುತೇಕ ಖಚಿತವೆನ್ನಲಾಗಿದೆ.

 

 

ಕಗ್ಗಂಟಾಗಿರುವ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಅಂತಿಮಗೊಳಿಸಿ ಕೇಂದ್ರೀಯ ಚುನಾವಣೆ ಸಮಿತಿಗೆ ಕಳುಹಿಸಲಿದ್ದಾರೆ.

 

 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಕೇಂದ್ರೀಯ ಚುನಾವಣಾ ಸಮಿತಿ ಅನುಮೋದನೆ ನಂತರ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

 

 

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ರಾಜ್ಯದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಇದೀಗ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

 

 

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:

 

 

ಉಡುಪಿ -ಚಿಕ್ಕಮಗಳೂರು: ಜಯಪ್ರಕಾಶ್ ಹೆಗಡೆ
ದಕ್ಷಿಣ ಕನ್ನಡ: ಪದ್ಮರಾಜ್
ಚಿತ್ರದುರ್ಗ: ಬಿ.ಎನ್. ಚಂದ್ರಪ್ಪ
ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ
ರಾಯಚೂರು: ಜಿ. ಕುಮಾರ ನಾಯಕ
ದಾವಣಗೆರೆ: ಲತಾ ಮಲ್ಲಿಕಾರ್ಜುನ
ಉತ್ತರ ಕನ್ನಡ: ಅಂಜಲಿ ನಿಂಬಾಳ್ಕರ್
ಬಾಗಲಕೋಟೆ: ಸಂಯುಕ್ತ ಪಾಟೀಲ್
ಹುಬ್ಬಳ್ಳಿ- ಧಾರವಾಡ: ವಿನೋದ್ ಅಸೂಟಿ
ಚಿಕ್ಕೋಡಿ: ಪ್ರಿಯಾಂಕಾ ಜಾರಕಿಹೊಳಿ
ಬೆಳಗಾವಿ: ಮೃಣಾಲ್ ಹೆಬ್ಬಾಳ್ಕರ್
ಬೆಂಗಳೂರು ದಕ್ಷಿಣ: ಸೌಮ್ಯ ರೆಡ್ಡಿ
ಬೆಂಗಳೂರು ಉತ್ತರ: ಪ್ರೊ. ರಾಜೀವ್ ಗೌಡ
ಬೆಂಗಳೂರು ಸೆಂಟ್ರಲ್: ಮನ್ಸೂರ್ ಅಲಿ ಖಾನ್
ಕಲಬುರಗಿ: ರಾಧಾಕೃಷ್ಣ
ಬಳ್ಳಾರಿ: ವೆಂಕಟೇಶ ಪ್ರಸಾದ್
ಚಾಮರಾಜನಗರ: ಸುನಿಲ್ ಬೋಸ್
ಮೈಸೂರು: ಎಂ. ಲಕ್ಷ್ಮಣ್
ಕೋಲಾರ: ಕೆ.ಹೆಚ್. ಮುನಿಯಪ್ಪ/ ಡಾ. ಎಲ್. ಹನುಮಂತಯ್ಯ
ಕೊಪ್ಪಳ: ರಾಜಶೇಖರ ಹಿಟ್ನಾಳ್/ ಅಮರೇಗೌಡ ಬಯ್ಯಾಪುರ
ಬೀದರ್: ರಾಜಶೇಖರ ಪಾಟೀಲ/ ಸಾಗರ್ ಬಿ. ಖಂಡ್ರೆ

WhatsApp Group Join Now
Telegram Group Join Now
Back to top button