Local News

ಆಸೀಫ್‌ ಸೇಠ್ ಶ್ರಮದಿಂದ ಕಣಬರ್ಗಿ ಲೇಔಟ್ ಕಾಮಗಾರಿ ಪುನರಾರಂಭ: ಸಚಿವ ಸತೀಶ್‌ ಜಾರಕಿಹೊಳಿ

WhatsApp Group Join Now
Telegram Group Join Now

ಬೆಳಗಾವಿ : ಶಾಸಕ ಆಸೀಫ್‌ (ರಾಜು) ಸೇಠ್, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳ ಶ್ರಮದಿಂದ ಕಣಬರ್ಗಿ ಲೇಔಟ್ ಕಾಮಗಾರಿ ಪುನಾರಂಭಗೊಂಡಿದ್ದು, ಭೂಮಿ ಪೂಜೆ ನೆರವೇರಿಸಲಾಗಿದೆ. ಲೋಕಸಭೆ ಚುನಾವಣೆ ನಂತರ ಕಾಮಗಾರಿ ಇನ್ನಷ್ಟು ಚುರುಗೊಳಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಬೆಳಗಾವಿ ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಸಂಖ್ಯೆ 6 ಕಣಬರ್ಗಿ ಲೇಔಟ್ ನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬೆಳಗಾವಿ ಪ್ರಾಧಿಕಾರದ ಭೂ ಮಾಲೀಕರ ಸಹಭಾಗಿತ್ವದ ವಸತಿ ವಿನ್ಯಾಸ ಯೋಜನೆ ಫಿರೋಜ್ ಸೇಠ್ ಶಾಸಕರಾದ ಸಮಯದ ಯೋಜನೆಯಾಗಿದೆ. ತಾಂತ್ರಿಕ ಕಾರಣಗಳಿಂದ ಯೋಜನೆ ವಿಳಂಬಯಾಗಿತ್ತು. ಈಗಿನ ಶಾಸಕ ಆಸೀಫ್‌ (ರಾಜು) ಸೇಠ್ ಶ್ರಮದಿಂದ ಕಣಬರ್ಗಿ ಲೇಔಟ್ ಕಾಮಗಾರಿ ಪುನರಾರಂಭಗೊಂಡಿದೆ ಎಂದು ತಿಳಿಸಿದರು.

ಶಾಸಕ ಆಸೀಫ್‌ (ರಾಜು) ಸೇಠ್ ಮಾತನಾಡಿ, ಕಣಬರ್ಗಿ ಲೇಔಟ್ ಎಂದೂ ಹೆಸರು ವಾಸಿಯಾದ ಯೋಜನೆ ಈ ಹಿಂದೆ ಫಿರೋಜ್ ಸೇಠ್ ಕಾಲದಲ್ಲಿ ಆಗಬೇಕಿತ್ತು. ಕೆಲವೊಂದು ಸಮಸ್ಯೆಗಳಿಂದ ಆಗಿಲ್ಲ. ಶೀಘ್ರದಲ್ಲಿ ಅಭಿವೃದ್ಧಿ ಕೆಲಸ ಆರಂಭಗೊಳ್ಳಲ್ಲಿದ್ದು, ಈ ಯೋಜನೆ 135 ಎಕರೆ ವ್ಯಾಪ್ತಿ ಹೊಂದಿದ್ದು, ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಇದೆ ಎಂದು ಹೇಳಿದರು.

ಇದೇ ವೇಳೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಬೆಳಗಾವಿ ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಸಂಖ್ಯೆ 6 ಕಣಬರ್ಗಿ ಲೇಔಟ್ ನ ಕಾಮಗಾರಿಯ ನೀಲ ನಕ್ಷೆ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಬುಡಾ ಆಯುಕ್ತ ಶಕೀಲ್ ಅಹಮದ್, ಜಿಪಂ ಮಾಜಿ ಉಪಾಧ್ಯಕ್ಷ ಅರುಣ ಕಟಾಂಬಳೆ ಸೇರಿದಂತೆ ಹಲವು ಮುಖಂಡರು, ಅಧಿಕಾರಿಗಳು ಇದ್ದರು.

WhatsApp Group Join Now
Telegram Group Join Now
Back to top button