State News

ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲು ಸಚಿವ ಸತೀಶ್‌ ಜಾರಕಿಹೊಳಿ ಕರೆ ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಆಯೋಜಿಸಿದ್ದ ಉತ್ತರ ಕನ್ನಡ ಲೋಕಸಭೆ ಕಾಂಗ್ರೆಸ್‌ ಕಾರ್ಯಕರ್ತರ ಸಭೆ

WhatsApp Group Join Now
Telegram Group Join Now

ಬೆಳಗಾವಿ: ಮತದಾರರು ಈ ಭಾರಿ ಅಭಿವೃದ್ಧಿ ಪರ ಮತ ಚಲಾಯಿಸಲು ಕಾಂಗ್ರೆಸ್‌ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ ಅವರಿಗೆ ಮತ ನೀಡಬೇಕು ಎಂದು  ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕರೆ ನೀಡಿದರು.

 

ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಆಯೋಜಿಸಿದ್ದ  ಉತ್ತರ ಕನ್ನಡ ಲೋಕಸಭೆ  ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಬಿಜೆಪಿ ಕೇಂದ್ರ ಸರ್ಕಾರ ನಿರುಪಯುಕ್ತ ಯೋಜನೆಗಳನ್ನು ಜಾರಿ ಮಾಡಿದ್ದು,  ಕಳೆದು 10 ವರ್ಷಗಳಲ್ಲಿ ನೀರಾವರಿ ಸೇರಿದಂತೆ ಯಾವುದೇ ಎಲ್ಲ ರಂಗಗಳಿಗೂ ಬಿಜೆಪಿಯ ಕೊಡುಗೆ ಶೂನ್ಯವಾಗಿದೆ ಎಂದು ಕಿಡಿಕಾರಿದರು.

 

ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಎಲ್ಲ ಜಾತಿಯವರಿಗೂ ಟಿಕೆಟ್ ನೀಡಿ ಅವಕಾಶ ಕಲ್ಪಿಸಿದೆ. ವಿಧಾನಸಭೆಯ ಚುನಾವಣೆಯಂತೆ ಈ ಲೋಕಾಸಭಾ ಚುನಾವಣೆ ಎದುರಿಸಲು ಸಿದ್ದರಿದ್ದು ಮತದಾರರು ಕಾಂಗ್ರೆಸ್ ಪರ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಹೇಳಿದರು.

 

 

 

ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರತ್ಯಕ್ಷವಾಗಿ ಇಲ್ಲ ಸಲ್ಲದ ಆರೋಪಗಳ ಮೂಲಕ ಜನರ ದಾರಿ ತಪ್ಪಿಸುವ ವ್ಯಕ್ತಿ 6 ಭಾರಿ ಸಂಸದರಾದರೂ ಖಾನಾಪುರ ಹಾಗೂ ಕಿತ್ತೂರು ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಧರ್ಮ ಆಧಾರಿತ ಹಾಗೂ ಭಾವನಾತ್ಮಕವಾಗಿ ಮಾತನಾಡುವವರಿಗೆ ಮತ ಹಾಕಲು ಅಸಾಧ್ಯ, ಮತದಾರರು ಈ ಭಾರಿ ಅಭಿವೃದ್ಧಿ ಪರ ಮತ ಚಲಾಯಿಸಬೇಕೆಂದು ಮನವಿ ಮಾಡಿದರು.

 

 

ಉತ್ತರಕನ್ನಡ ಕಾಂಗ್ರೆಸ್‌ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಮಾತನಾಡಿ, ದೇಶ ಮುನ್ನಡೆಯಬೇಕಾದರೆ ಸಂವಿಧಾನ ಅವಶ್ಯ, ಸಂವಿಧಾನ ರಕ್ಷಣೆ ಮಾಡುವ ವ್ಯಕ್ತಿಗಳು ದೇಶಕ್ಕೆ ಬೇಕು, ಆದರೇ ಸಂವಿಧಾನ ಬದಲಾಯಿಸುವ ಜನರ ಅವಶ್ಯಕತೆ ನಮಗಿಲ್ಲ. ಇದು ಕೇವಲ ಲೋಕಸಭಾ ಚುನಾವಣೆಯಲ್ಲ, ಕೇವಲ ಬಿಜೆಪಿ ಹಾಗೂ ಕಾಂಗ್ರೆಸ್ ಚುನಾವಣೆಯಲ್ಲ, ಇದು ಬಡವರ ಹಾಗೂ ಶ್ರೀಮಂತರ ನಡುವಿನ ಚುನಾವಣೆ, ನ್ಯಾಯ ಅನ್ಯಾಯದ ನಡುವಿನ ಚುನಾವಣೆಯಾಗಿದೆ. ಹೇಳಿದಂತೆ ನಡೆಯುವ ಸರ್ಕಾರ ನಮ್ಮದು, ರಾಜ್ಯದಲ್ಲಿ ನೀಡಿದ ಎಲ್ಲ ಗ್ಯಾರೆಂಟಿಗಳನ್ನು ಜಾರಿಗೊಳಿಸಲಾಗಿದೆ ಅದರಂತೆಯೇ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹಲವು ಗ್ಯಾರೆಂಟಿ ಘೋಷಣೆ ಮಾಡಿದ್ದು ಅಧಿಕಾರಕ್ಕೆ ಬಂದರೆ ಕೇವಲ ತಿಂಗಳೋಳಗೆ ಅವುಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಭರವಸೆ ನೀಡಿದರು.

 

 

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಉತ್ತರ ಕನ್ನಡ ಲೋಕಸಭೆಯ ಚುನಾವಣೆಯಲ್ಲಿ  ಖಾನಾಪುರ ಕ್ಷೇತ್ರದ  ಡಾ. ಅಂಜಲಿ ನಿಂಬಾಳ್ಕರ ಅವರಿಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಂದು ಘೋಷಣೆ ಮಾಡಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ. ಇದನ್ನು ಮತದಾರರು ಮತ ನೀಡುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು. ಒಳ್ಳೆಯ ನಾಯಕರ ಬೆಂಬಲ ನಮ್ಮೆಲ್ಲರಿಗಿದ್ದು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಗೆಲವು ಸಾಧಿಸುವ ಪಣವನ್ನು ಕಾರ್ಯಕರ್ತರು ತೊಡಬೇಕೆಂದು ಹೇಳಿದರು.

 

 

ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ರಾಜಾಸಲೀಂ ಕಾಶೀಂನವರ, ಶಂಕರ ಹೊಳಿ, ಬ್ಲಾಕ ಅಧ್ಯಕ್ಷರಾದ ಸಂಗನಗೌಡ ಪಾಟೀಲ, ನಿಂಗಪ್ಪ ಅರಕೇರಿ, ಕಿತ್ತೂರು ಹಾಗೂ ಎಂ.ಕೆ.ಹುಬ್ಬಳ್ಳಿಯ ಪಟ್ಟಣ ಪಂಚಾಯಿತಿಯ ಸದಸ್ಯರು ಹಾಜರಿದ್ದರು‌.

WhatsApp Group Join Now
Telegram Group Join Now
Back to top button