Crime News

ಕಂಡಕ್ಟರ್ ಗೆ ರಕ್ತ ಸುರಿಯುವಂತೆ ಹೊಡೆದ ವ್ಯಕ್ತಿ!

WhatsApp Group Join Now
Telegram Group Join Now

ಹಾವೇರಿ: ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಬಸ್‌ (Bus) ಕಂಡಕ್ಟರ್‌ (Conductor) ಮೇಲೆ ಹಲ್ಲೆ ಮಾಡಿದ ಘಟನೆ ಹಾವೇರಿ (Haveri) ಜಿಲ್ಲೆಯ ಶಿಗ್ಗಾವಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಸವಣೂರು ಘಟಕದ ಬಸ್ ಕಂಡಕ್ಟರ್ ಪ್ರಧಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಬಸ್ ಹತ್ತುವ ವಿಚಾರಕ್ಕೆ ಬಸ್‌ನ ನಿರ್ವಾಹಕ ಮತ್ತು ಪ್ರಯಾಣಿಕನ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ

 

ಪ್ರಯಾಣಿಕನಿಗೆ ಈ ಸ್ಥಳದಿಂದ ಹತ್ತಲು ಬರುವುದಿಲ್ಲ ಬಸ್‌ ನಿಲ್ದಾಣದಿಂದ ಹತ್ತಲು ಕಂಡಕ್ಟರ್‌ ತಿಳಿಸಿದ್ದಾನೆ. ಇದರಿಂದಾಗಿ ಕೋಪಗೊಂಡ ಪ್ರಯಾಣಿಕ ಅವಾಚ್ಯ ಶಬ್ದದಿಂದ ಬೈದು ಕಂಡಕ್ಟರ್‌ಗೆ ಮನಸೋ ಇಚ್ಛೆ ಥಳಿಸಿದ್ದಾನೆ. ಘಟನೆ ನಡೆದ ಬಳಿಕ ಹಲ್ಲೆ ಮಾಡಿದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಶಿಗ್ಗಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

WhatsApp Group Join Now
Telegram Group Join Now
Back to top button