Technology News

voter ID: ಮದುವೆಯ ನಂತರ ಆನ್‌ಲೈನ್‌ನಲ್ಲಿ ವೋಟರ್‌ ಐಡಿ ವರ್ಗಾವಣೆ ಮಾಡುವುದು ಹೇಗೆ? ಇಲ್ಲಿದೆ ಸರಳ ಹಂತ

WhatsApp Group Join Now
Telegram Group Join Now

ನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ (Lok Sabha Elections) ದಿನಾಂಕ ಘೋಷಣೆ ಆಗಲಿದೆ. ಈ ನಡುವೆ ಮತದಾರರ ಗುರುತಿನ ಚೀಟಿಯಲ್ಲಿ ಆಗಿರುವ ತಪ್ಪುಗಳನ್ನು ಸರಿ ಮಾಡಿಕೊಳ್ಳಲು, ವಿಳಾಸ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಹೌದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಪ್ರಮುವಾಗಿದ್ದು, ಈ ಮೂಲಕ ದೇಶದ ಭವಿಷ್ಯವನ್ನು ಜನರು ಮತದಾನದ ಮೂಲಕ ಬರೆಯುತ್ತಾರೆ.

ಇನ್ನೇನು ಕೆಲವೇ ವಾರಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ಕಾವು ಜೋರಾಗಿದೆ. ಇದರ ಬೆನ್ನಲ್ಲೇ ಯಾರೆಲ್ಲಾ ಬೇರೆ ಊರಿಗೆ ವಿವಾಹವಾಗಿ ಹೋಗಿದ್ದಾರೋ ಅವರು ಆಯಾ ಕ್ಷೇತ್ರದಲ್ಲಿ ಮತದಾನ ಮಾಡಲು ವಿಳಾಸ ಬದಲಾವಣೆ ಮಾಡಿಕೊಳ್ಳಬೇಕಿದೆ. ಹಾಗಿದ್ರೆ, ಬನ್ನಿ ಆನ್‌ಲೈನ್‌ನಲ್ಲಿ ವೋಟರ್‌ ಐಡಿಯಲ್ಲಿ (Voter ID) ಸುಲಭವಾಗಿ ಹೇಗೆ ವಿಳಾಸ ಬದಲಾವಣೆ ಮಾಡುವುದು ಅನ್ನೋದನ್ನು ಸರಳ ಹಂತದ ಮೂಲಕ ತಿಳಿಯೋಣ.

ವೋಟರ್‌ ಐಡಿ ವರ್ಗಾವಣೆ:

ಮತದಾನ ಮಾಡಲು ಮತದಾರರ ಗುರುತಿನ ಚೀಟಿಯಲ್ಲಿನ ಮಾಹಿತಿಯು ಅಪ್‌ಡೇಟ್‌ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಈ ನಡುವೆ ಮದುವೆಯ ನಂತರ ಮಹಿಳೆಯ ವಿಳಾಸ ಬದಲಾಗುವುದು ಸಾಮಾನ್ಯವಾದ ವಿಚಾರ. ಇದಕ್ಕಾಗಿ ಕಡ್ಡಾಯವಾಗಿ ಆಕೆಯ ಹೊಸ ವಿಳಾಸಕ್ಕೆ ತನ್ನ ಮತದಾರರ ಗುರುತಿನ ಚೀಟಿಯನ್ನು ವರ್ಗಾಯಿಸಬೇಬೇಕಿದೆ.

ಮದುವೆಯ ನಂತರ ಮತದಾರರ ಗುರುತಿನ ಚೀಟಿಯನ್ನು ಹೇಗೆ ವರ್ಗಾಯಿಸುವುದು ಎಂಬುದರ ಕುರಿತು ಸರಳವಾದ ಹಂತ-ಹಂತದ ಮಾರ್ಗದರ್ಶಿ ಇಲ್ಲಿದೆ:

ಹಂತ 1: ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP) ವೆಬ್‌ಸೈಟ್‌ಗೆ ಭೇಟಿ ನೀಡಿ. ನಂತರದಲ್ಲಿ ನಿಮ್ಮ ರುಜುವಾತುಗಳನ್ನು ಬಳಸಿಕೊಂಡು NVSP ಪೋರ್ಟಲ್‌ಗೆ ಲಾಗ್ ಇನ್ ಮಾಡಿ. ಈ ವೇಳೆ ‘ವಾಸಸ್ಥಾನದ ಬದಲಾವಣೆ/ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ನಮೂದುಗಳ ತಿದ್ದುಪಡಿ’ ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ ಮತ್ತು ಫಾರ್ಮ್ 8 ಅನ್ನು ಭರ್ತಿ ಮಾಡಿ.

ಹಂತ 2: ಇದೆಲ್ಲಾ ಆದ ಮೇಲೆ ಸೆಲ್ಫ ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ ನಂತರ ನಿಮ್ಮ EPIC ಸಂಖ್ಯೆಯನ್ನು ಪ್ರದರ್ಶಿಸಲು ಸಬ್‌ಮಿಟ್‌ ಬಟನ್‌ ಮೇಲೆ ಟ್ಯಾಪ್‌ ಮಾಡಿ. ಇದೆಲ್ಲಾ ಆದ ಮೇಲೆ ನಿಮ್ಮ ಮತದಾರರ ವಿವರಗಳನ್ನು ಪರಿಶೀಲಿಸಿ ಮತ್ತು ಶಿಫ್ಟಿಂಗ್‌ ಟು ರೆಸಿಡೆನ್ಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಕ್ಲಿಕ್‌ ಮಾಡಿದ್ರೆ ನಿಮಗೆ ವಿಧಾನಸಭಾ ಕ್ಷೇತ್ರದ ಒಳಗೆ ಅಥವಾ ಹೊರಗೆ ಎಂಬುದನ್ನು ಎಂಬ ಆಯ್ಕೆ ಲಭ್ಯ ಇದ್ದು, ನಿಮಗೆ ಅಗತ್ಯ ಇರೋದನ್ನು ಆಯ್ಕೆ ಮಾಡಿ.

ಹಂತ 3: ನಂತರದಲ್ಲಿ ರಾಜ್ಯ, ಜಿಲ್ಲೆ, ವಿಧಾನಸಭೆ ಅಥವಾ ಸಂಸದೀಯ ಕ್ಷೇತ್ರ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್ ಮತ್ತು ಹೊಸ ವಿಳಾಸ ಸೇರಿದಂತೆ ಅಗತ್ಯ ವಿವರಗಳೊಂದಿಗೆ ಫಾರ್ಮ್ 8 ಅನ್ನು ಪೂರ್ಣಗೊಳಿಸಿ. ಅಗತ್ಯವಿರುವ ವಿಳಾಸ ಪುರಾವೆ ಡಾಕ್ಯುಮೆಂಟ್ ಅನ್ನು ಅಪ್‌ಲೋಡ್ ಮಾಡಿ, ಮಾಹಿತಿಯನ್ನು ಘೋಷಿಸಿ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಸಬ್‌ಮಿಟ್‌ ಮಾಡಿ.

ಹಂತ 4: ಇದೆಲ್ಲಾ ಆದ ಮೇಲೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಅರ್ಜಿಯ ಉಲ್ಲೇಖ ಸಂಖ್ಯೆಯೊಂದಿಗೆ ಇಮೇಲ್‌ನಲ್ಲಿ ಮೆಸೆಜ್‌ ಅನ್ನು ನೀವು ಪಡೆಯುತ್ತೀರಿ. ಬಳಿಕ ನೀವು ಕೆಲವೇ ದಿನಗಳಲ್ಲಿ ಚುನಾವಣಾ ಕಚೇರಿಯಿಂದ ಹೊಸ ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಳ್ಳಬಹುದು ಅಥವಾ NVSP ಪೋರ್ಟಲ್‌ನಿಂದ ಡಿಜಿಟಲ್ ವೋಟರ್ ಐಡಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಯಾವೆಲ್ಲಾ ದಾಖಲೆಯನ್ನು ಅಪ್‌ಲೋಡ್ ಮಾಡಬಹುದು?:

ನೀವು ವಿಳಾಸದ ಬದಲಾವಣೆ ಸಂದರ್ಭದಲ್ಲಿ ಸರ್ಕಾರದಿಂದ ನೀಡಲಾಗಿರುವ ಯಾವುದಾದರೂ ದಾಖಲೆಯನ್ನು ಅಂದರೆ ಹೊಸ ವಿಳಾಸ ಇರುವ ದಾಖಲೆಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಯುಟಿಲಿಟಿ ಬಿಲ್‌ಗಳು (ನೀರು, ಗ್ಯಾಸ್, ಅಥವಾ ವಿದ್ಯುತ್), ಆಧಾರ್ ಕಾರ್ಡ್, ರಾಷ್ಟ್ರೀಕೃತ ಅಥವಾ ನಿಗದಿತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಪಾಸ್‌ಬುಕ್, ಭಾರತೀಯ ಪಾಸ್ಪೋರ್ಟ್, ಭೂಮಿ ದಾಖಲೆ ನೊಂದಾಯಿತ ಗುತ್ತಿಗೆ ಅಥವಾ ಬಾಡಿಗೆ ಪತ್ರ ಸೇರಿದಂತೆ ಇತರೆ ದಾಖಲೆಗಳನ್ನು ಬಳಕೆ ಮಾಡಬಹುದು.

WhatsApp Group Join Now
Telegram Group Join Now
Back to top button